ಒಬ್ಬ ರೌಡಿಯ ಮೇಲೆ ಹಲವಾರು ಕೇಸ್ ಗಳಿರೋದನ್ನು ಒಬ್ಬ ಅಧಿಕಾರಿ ತಿಳಿಸಿದಾಗ, ಅವನನ್ನು ಯಾಕೆ ಗಡೀಪಾರು ಮಾಡಿಲ್ಲ? ಕೂಡಲೇ ಅ ಕೆಲಸ ಮಾಡಿ ಹೇಳಿದರು. ರೌಡಿಗಳೊಂದಿಗೆ ಮಾತಾಡಿದ ಅವರು, 8-10 ಜನರನ್ನು ಗಡೀಪಾರು ಮಾಡಬೇಕಾದ ಅವಶ್ಯಕತೆಯಿದೆ, ಹೆಸರುಗಳನ್ನು ಅಧಿಕಾರಿಗಳು ತಿಳಸುತ್ತಾರೆ. ಮುಂದಿನ ದಿನಗಳಲ್ಲಿ ನಡತೆ ಮತ್ತು ವರ್ತನೆ ಸರಿ ಹೋಗದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಅಂತ ಎಚ್ಚರಿಸಿದರು.