ರೌಡಿಗಳು ಸಹಜ ಸಾವು ಕಾಣೋದು ವಿರಳ ಸಂದರ್ಭಗಳಲ್ಲಿ ಅಂತ ಹೇಳಿದರೆ ಉತ್ಪ್ರೇಕ್ಷೆಯಾಗಲಾರದು. ಬೆಂಗಳೂರಲ್ಲಿ ಹತ್ಯೆಗೀಡಾಗುವ ರೌಡಿ ಅಥವಾ ಹಿಸ್ಟರಿ ಶೀಟರ್ ತಮ್ಮ ಎದುರಾಳಿಗಳಿಂದಲೇ ಅಂತ್ಯ ಕಾಣುತ್ತಾರೆ. ಹಾಗೆ ನೋಡಿದರೆ, ಮಂಜನ ಮೇಲೆ ಹಲವಾರು ಪ್ರಕರಣಗಳಿದ್ದವಂತೆ. 2024 ರ ಲೋಕ ಸಭಾ ಚುನಾವಣೆ ಸಂದರ್ಭದಲ್ಲಿ ಅವನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಗಡೀಪಾರು ಮಾಡಲಾಗಿತ್ತು.