ಉಡುಪಿ ಕೃಷ್ಣಮಠದಲ್ಲಿ ಯುಟಿ ಖಾದರ್

ಜನ್ಮಾಷ್ಟಮಿಯ ಪವಿತ್ರವಾದ ದಿನವಾದ ಇಂದು ಉಡುಪಿಯ ಕೃಷ್ಣ ಮಠಕ್ಕೆ ಆಗಮಿಸಿ ದರ್ಶನ ಪಡೆದಿದ್ದು ಧನ್ಯತೆಯ ಭಾವ ಮೂಡಿಸಿದೆ. ನಾಡಿನ ಜನರೆಲ್ಲ ಪ್ರೀತಿ-ವಿಶ್ವಾಸಗಳೊಂದಿಗೆ ನೆಮ್ಮದಿಯಿಂದ ಬದುಕುವ ಶಕ್ತಿಯನ್ನು ಕೃಷ್ಣ ಪರಮಾತ್ಮ ದಯಪಾಲಿಸಿಸಲಿ, ಕರ್ನಾಟಕ ಹೆಚ್ಚೆಚ್ಚು ಅಭಿವೃದ್ಧಿ ಹೊಂದಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಪೂರಕವಾಗಲಿ ಎಂದು ಕೃಷ್ಣನನ್ನು ಪ್ರಾರ್ಥಿಸಿದ್ದಾಗಿ ಹೇಳಿದರು.