ಲೇಹ್ ನಿಂದ ಸರ್ ಕ್ರೀಕ್ ವರೆಗಿನ ಭಾರತದ 36 ಭಾಗಗಳಲ್ಲಿ ಪಾಕಿಸ್ತಾನದ ಸೇನೆಯು 300 ರಿಂದ 400 ಡ್ರೋಣ್ಗಳನ್ನು ಹಾರಿ ಬಿಟ್ಟು ವಾಯುಪ್ರದೇಶದ ಉಲ್ಲಂಘನೆ ಮಾಡಿದೆ, ಪಂಜಾಬ್ ರಾಜ್ಯದ ಭಟಿಂಡಾದಲ್ಲಿರುವ ಸೇನಾನೆಲೆ ಮೇಲೆ ದಾಳಿ ನಡೆಸುವ ವಿಫಲ ಯತ್ನವನ್ನು ಪಾಕಿಸ್ತಾನ ಮಾಡಿದೆ, ಅದರೆ ಪಾಕಿಸ್ತಾನದ ಎಲ್ಲ ಪ್ರಯತ್ನಗಳಿಗೆ ಭಾರತದ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ವ್ಯೋಮಿಕಾ ಸಿಂಗ್ ಹೇಳಿದರು.