ಆಳಂದ್ ಶಾಸಕ ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯಿಂದ ಬಂದವರು, ಹಾಗಾಗಿ ಅವರೇನಾದರೂ ಹೇಳಿದರೆ ಎಲ್ಲರೂ ಗಂಭೀರವಾಗಿ ತಗೋತಾರೆ, ಅದಲ್ಲದೆ ಮುಖ್ಯಮಂತ್ರಿಯವರೊಂದಿಗೆ ಅವರಿಗೆ ವಿಶೇಷ ಸಲುಗೆ ಇದೆ, ಖಾಸಗಿಯಾಗಿ ಅವರು ಹೋಗೋ ಬಾರೋ ಅಂತ ಮಾತಾಡಿಕೊಳ್ಳುತ್ತಾರೆ, ಸಲುಗೆಯಿಂದಲೇ ಸಿದ್ದರಾಮಯ್ಯ ಬಗ್ಗೆ ಮಾತಾಡಿರಬಹುದು, ಅದಕ್ಕೆ ವಿಪರೀತ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ರಾಜಣ್ಣ ಹೇಳಿದರು.