ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತಾದಿಗಳ ಪಾದ ತೊಳೆದ ವಿನಯ್​ ಗುರೂಜಿ

ಚಿಕ್ಕಮಗಳೂರು ಜಿಲ್ಲೆಯಿಂದ ಅನೇಕ ಭಕ್ತರು ತಂಡೋಪತಂಡವಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದರು. ಪಾದಯಾತ್ರಿಗಳು ನಿನ್ನೆ (ಮಾ.04)ರ ರಾತ್ರಿ ಮೂಡಿಗೆರೆ ತಾಲೂಕಿನ ನೀರುಗಂಡಿಯಲ್ಲಿ ವಾಸವಾಗಿದ್ದರು. ಈ ವೇಳೆ ಅವಧೂತ ವಿನಯ್ ಗುರೂಜಿ ಪಾದಯಾತ್ರಿಗಳ ಕಾಲು ತೊಳೆದು, ಪುಷ್ಪ ಹಾಕಿ ಪೂಜಿಸಿದರು.