ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ಮುಸ್ಲಿಂ ಕುಟುಂಬ

ದೇವನೊಬ್ಬ ನಾಮ ಹಲವು ಅಂತ 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ್ದನ್ನು ಗೌಸ್ ಪುನರುಚ್ಛರಿಸಿ ತಮಗೆ ಯಾವುದೇ ದೇವ ದೇವತೆಯರ ಬಗ್ಗೆ ಭೇದಭಾವ ಇಲ್ಲ ಅನ್ನುತ್ತಾರೆ. ಹಿಂದೂ-ಮುಸ್ಲಿಂ ಜಗಳ, ಮತೀಯ ಗಲಭೆ ಸ್ವಾಭಾವಿಕ ಅನ್ನುವ ಮಟ್ಟಿಗೆ ಜನರು ಮೆದುಳನ್ನು ಟ್ಯೂನ್ ಮಾಡಿಕೊಂಡಿರುವ ಇವತ್ತಿನ ಕಾಲಘಟ್ಟದಲ್ಲಿ ಗೌಸ್ ಮತ್ತು ಹಾಜಿರ ಸರ್ವಧರ್ಮ ಸಮನ್ವಯತೆಯ ಪ್ರತಿನಿಧಿಗಳಾಗಿ ಗೋಚರವಾಗುತ್ತಾರೆ.