ಯಾವುದೇ ಸರ್ಕಾರ ಬಂದಾಗ ವರ್ಗಾವಣೆ ಆಗದೇ ಇರುತ್ತದೆಯಾ. ಕಾನೂನು ಪರಿಮಿತಿಯಲ್ಲಿ ವರ್ಗಾವಣೆ ಮಾಡದೇ ಇರುತ್ತಾರಾ. ಪ್ರತಿ ವರ್ಷ ವರ್ಗಾವಣೆಯನ್ನ ಬೊಮ್ಮಾಯಿ, ಯಡಿಯೂರಪ್ಪ, ಕುಮಾರಸ್ವಾಮಿ ಎಲ್ಲರೂ ಮಾಡಿದ್ದಾರೆ. ಅದೇ ರೀತಿ ವರ್ಗಾವಣೆ ಆಗುತ್ತದೆ. ಅದನ್ನೆ ವರ್ಗಾವಣೆ ದಂಧೆ ಅಂದರೇ ಏನು ಅರ್ಥ. ಏನೋ ಹೇಳಿ ಹೋಗುವುದು ಕುಮಾರಸ್ವಾಮಿ ಸ್ಥಾನಕ್ಕೆ ಗೌರವ ತರುವ ವಿಚಾರವಲ್ಲ. ದೇವೇಗೌಡರ ಬಳಿಯೇ ಹೋಗಿ ಕೇಳಿ. ನಿಮ್ಮ ಮಗ ಈ ರೀತಿ ಮಾತನಾಡುತ್ತಿದ್ದಾರೆ, ನಿಮ್ಮ ಅಭಿಪ್ರಾಯವೇನು ಎಂದು ಕೇಳಿನೊಡಿ. ಆಗ ಅವರೇನಾದ್ರು ಹೇಳಿದ್ರೆ ಉತ್ತರ ಕೊಡುತ್ತೇನೆ. ನಾವು ಅನೇಕರಿಗೆ ಉತ್ತರ ಕೊಡುವುದು ಬಿಟ್ಟಿದ್ದೇವೆ. ಅದೇ ರೀತಿ ಕುಮಾರಸ್ವಾಮಿ ಅವರಿಗೂ ಉತ್ತರ ಕೊಡುವುದು ಬಿಡಬೇಕು. ಈ ಹಿಂದೆ ದೇವೇಗೌಡರ ಹೇಳುತ್ತಿದ್ದ ವಿಚಾರವನ್ನ ನಾನು ಈಗ ಹೇಳಲು ಸಾಧ್ಯವಿಲ್ಲ. ಒಟ್ಟಿಗೆ ಊಟ ಮಾಡುತ್ತಿದ್ದ ವೇಳೆ ಹೇಳುತ್ತಿದ್ದ ಮಾತನ್ನ ಹೇಳಲು ಸಾಧ್ಯವಿಲ್ಲ. ಖಾಸಗಿ ವಿಚಾರವನ್ನ ಚರ್ಚೆ ಮಾಡಿದ್ದು ಅದರ ಬಗ್ಗೆ ನಾನು ಮಾತನಾಡಬಾರದು. ದೇವೇಗೌಡರು ಕುಮಾರಸ್ವಾಮಿ ಮಾತನಾಡಿದ್ದು ಸರಿ ಎಂದು ಹೇಳಿದ್ರೆ ನಾನು ಒಪ್ಪಿಕೊಳ್ಳುತ್ತೇನೆ. ಕುಮಾರಸ್ವಾಮಿ ಸರ್ಕಾರದ್ದೂ ವರ್ಗಾವಣೆಗೆ ತಡೆ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದ್ದು ಆಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ರು.