ತಮ್ಮ ಸಮುದಾಯದ 1,000 ಮತಗಳನ್ನೂ ಹೊಂದಿರದ ಸಿಂಧ್ಯಾ ಅವರನ್ನು 1983 ರಲ್ಲಿ ಕನಕಪುರಕ್ಕೆ ತಂದು ವಿಧಾನಸಭೆಗೆ ಆಯ್ಕೆಯಾಗುವಂತೆ ಮಾಡಿದ್ದು ಹೆಚ್ ಡಿ ದೇವೇಗೌಡರು. ಜೆಡಿಎಸ್ ಪಕ್ಷದಲ್ಲಿ ಹಲವಾರು ಮಜಲುಗಳ ಅಧಿಕಾರ ಅನುಭವಿಸಿದ ಸಿಂಧ್ಯಾ ಈಗ ಡಿಕೆ ಸುರೇಶ್ ಜೊತೆ ನಿಂತು ಕಾಂಗ್ರೆಸ್ ಪರ ಮತ ಯಾಚಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.