ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಪೆಟ್ರೋಲಿಯಂ ಪದಾರ್ಥಗಳಲ್ಲಿ ಕಲಬೆರಕೆ ವಿಷಯದಲ್ಲಿ ಮಾತಾಡಿದ ಪ್ರಲ್ಹಾದ್ ಜೋಶಿ, ಅದು ರಾಜ್ಯದಲ್ಲಿ ನಡೆದಿದ್ದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ, ಕೇಂದ್ರ ಸರ್ಕಾರ ಕಾನೂನು ಮತ್ತು ನಿಯಮಗಳನ್ನು ರೂಪಿಸುತ್ತದೆ, ಅದರೆ ಅವುಗಳನ್ನು ಜಾರಿಗೊಳಿಸುವುದನ್ನು ರಾಜ್ಯ ಸರ್ಕಾರಗಳು ಮಾಡುತ್ತವೆ, ಗ್ರಾಹಕರು ಸಹಾಯವಾಣಿಯಲ್ಲಿ ದೂರು ದಾಖಲಿಸಿದರೆ ಅದನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಜೋಶಿ ಹೇಳಿದರು.