ಬರುವ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಪಕ್ಷಗಳಂತೆ ಬಿಜೆಪಿ ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದೆ. ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ದೆಹಲಿಯ ಕರವಾಲ್ ನಗರದಲ್ಲಿ ರ್ಯಾಲಿ ನಡೆಸಿದರು. ಆಗ ಪಟ್ಪರ್ಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಂದ್ರ ಸಿಂಗ್ ನೇಗಿ ಅವರ ಪಾದಗಳನ್ನು ಮೂರು ಬಾರಿ ಮುಟ್ಟಿ ನಮಸ್ಕರಿಸಿದ್ದಾರೆ.