ಅಡಿಲೇಡ್‌ನಲ್ಲಿನ ಸೋಲಿನ ನಂತರ, ರೋಹಿತ್‌ಗೆ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ನಾಯಕ ರೋಹಿತ್, ಶಮಿ ಸರಣಿಯ ಮಧ್ಯದಲ್ಲಿ ತಂಡವನ್ನು ಸೇರಿಕೊಳ್ಳಲು ಬಾಗಿಲು ತೆರೆದಿದೆ. ಆದರೆ ತಂಡವು ಅವರ ಮೇಲೆ ಯಾವುದೇ ರೀತಿಯ ಒತ್ತಡವನ್ನು ಹಾಕಲು ಬಯಸುವುದಿಲ್ಲ. ಏಕೆಂದರೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯ ಆಡುವಾಗ ಶಮಿ ಮೊಣಕಾಲಿನಲ್ಲಿ ಊತ ಕಂಡುಬಂದಿದೆ.