ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯಗೊಂಡಿದೆ. ಜನರು ಹತ್ತು ಪ್ರಮುಖ ಘಾಟ್ಗಳ ಮೂಲಕ ತ್ರಿವೇಣಿ ಸಂಗಮ ಪ್ರವೇಶಿಸಿ, ಪವಿತ್ರ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಕೇವಲ ನನ್ನ ಜವಾಬ್ದಾರಿ ಕುಂಭಮೇಳ ಆಯೋಜನೆಗಷ್ಟೇ ಸೀಮಿತವಲ್ಲ, ಅದನ್ನು ಶುಚಿಯಾಗಿಡುವುದು ಕೂಡ ನನ್ನ ಕೆಲಸವೇ ಎಂದು ಸಿಎಂ ಯೋಗಿ ಆಗಿತ್ಯನಾಥ್ ಖುದ್ದಾಗಿ ಇಂದು ಅರೈಲ್ ಘಾಟ್ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕೆಲವು ಅಧಿಕಾರಿಗಳು ಜತೆಗಿದ್ದರು.