ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ವಿನೋದ್ ಪ್ರಭಾಕರ್ ಅವರು ‘ಫೈಟರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹೊಸ ಹಾಡು ಬಿಡುಗಡೆ ಆಗಿದೆ. ಈ ಹಾಡಿಗೆ ಗುರು ಕಿರಣ್ ಸಂಗೀತ ನೀಡಿದ್ದು, ಕವಿರಾಜ್ ಅವರು ಸಾಹಿತ್ಯ ಬರೆದಿದ್ದಾರೆ. ಸಾಂಗ್ ರಿಲೀಸ್ ವೇದಿಕೆಯಲ್ಲಿ ವಿನೋದ್ ಅವರು ತಂದೆ ಟೈಗರ್ ಪ್ರಭಾಕರ್ ಅವರನ್ನು ನೆನಪು ಮಾಡಿಕೊಂಡರು. ತಂದೆಯ ರೀತಿಯೇ ತಮ್ಮ ಸಿನಿಮಾ ಡೈಲಾಗ್ ಹೊಡೆದರು. ಅದನ್ನು ಕೇಳಿ ಅಭಿಮಾನಿಗಳು ಎಂಜಾಯ್ ಮಾಡಿದರು. ‘ಫೈಟರ್’ ಸಿನಿಮಾಗೆ ನೂತನ್ ಉಮೇಶ್ ಅವರು ನಿರ್ದೇಶನ ಮಾಡಿದ್ದಾರೆ.