ಒಂದು ಸಮಯದಲ್ಲಿ ಬಲಾಢ್ಯ ಪ್ರಾದೇಶಿಕ ಪಕ್ಷವೆಂದು ಗುರುತಿಸಿಕೊಂಡಿದ್ದ ಜೆಡಿಎಸ್ ಪಕ್ಷಕ್ಕೆ ಬಿಜೆಪಿಯ ಸೆಕಂಡ್ ಫಿಡ್ಲ್ ಆಗಿ ಕೆಲಸ ಮಾಡುವ ಪರಿಸ್ಥಿತಿ ಬಂದಿರೋದು ದುರಂತ. ಕುಮಾರಸ್ವಾಮಿ ಮಾತಾಡುವ ಧಾಟಿ ನೋಡುತ್ತಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆ ಕೂಡ ಇದ್ದಂತಿಲ್ಲ. ಕುಮಾರಸ್ವಾಮಿ ದೆಹಲಿಗೆ ಹೋಗಿ ಮೈತ್ರಿ ಅಂತಿಮಗೊಳಿಸಿಕೊಂಡು ಬಂದಾಗ ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಆಡಿದ ಮಾತುಗಳು ನೆನಪಿಗೆ ಬರುತ್ತವೆ.