ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಮಾಜಿ ಎಂಎಲ್ಸಿ ಎಂ.ಸಿ.ವೇಣುಗೋಪಾಲ್ಗೆ ಐಟಿ ಶಾಕ್ ಎದುರಾಗಿದೆ. ನಗರದ ಜೆ.ಪಿ.ನಗರದಲ್ಲಿರುವ ಎಂ.ಸಿ.ವೇಣುಗೋಪಾಲ್ ನಿವಾಸದ ಮೇಲೆ ಇಂದು ಬೆಳಿಗ್ಗೆ 2 ಕಾರುಗಳಲ್ಲಿ ಬಂದಿರುವ 15 ಅಧಿಕಾರಿಗಳ ತಂಡ ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.