ಮಂಜುನಾಥ್ ಮನೆ ಬಳಿ ಬಿಗಿ ಪೊಲೀಸ್ ಭದ್ರತೆ

ಮಂಜುನಾಥ್ ರಾವ್ ಅವರ ಪಾರ್ಥೀವ ಶರೀರ ಬೆಂಗಳೂರುನಿಂದ ಶಿವಮೊಗ್ಗ ತರಲು ಮಂಜುನಾಥ್ ಪತ್ನಿ ಪಲ್ಲವಿ ಅವರ ಸಹೋದರ ಪ್ರದೀಪ್ ಮತ್ತು ಸಹೋದರಿ ವಿನುತಾ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ್ದಾರೆ. ನಮ್ಮ ಶಿವಮೊಗ್ಗ ವರದಿಗಾರ ನೀಡುವ ಮಾಹಿತಿ ಪ್ರಕಾರ ಪಾರ್ಥೀವ ಶರೀರ ಬೆಳಗಿನ ಜಾವ ಮೂರು ಗಂಟೆಗೆ ಆಗಮಿಸಲಿದೆ. ಮಗನೊಂದಿಗೆ ಪಲ್ಲವಿ ಅವರು ಪ್ರದೀಪ್ ಮತ್ತು ವಿನುತಾ ಜೊತೆ ಕಾರಲ್ಲೇ ಶಿವಮೊಗ್ಗ ಬರಬಹುದು.