‘ಚಂದ್ರಯಾನ 3 ಲ್ಯಾಂಡಿಂಗ್​ ಯಶಸ್ವಿಯಾಗಲಿ’: ಇಸ್ರೋಗೆ ಶುಭ ಕೋರಿದ ನಟ ರಮೇಶ್​ ಅರವಿಂದ್​

0 seconds of 1 minute, 12 secondsVolume 0%
Press shift question mark to access a list of keyboard shortcuts
00:00
01:12
01:12
 

ಭಾರತದ ‘ಚಂದ್ರಯಾನ 3’ ಬಗ್ಗೆ ಇಡೀ ಪ್ರಪಂಚವೇ ಮಾತನಾಡುತ್ತಿದೆ. ಚಂದ್ರನ ಅಂಗಳಕ್ಕೆ ಭಾರತ ಕಳಿಸಿರುವ ಉಪಗ್ರಹವು ಇಂದು (ಆಗಸ್ಟ್​ 23) ಲ್ಯಾಂಡ್​ ಆಗಲಿದೆ. ಈ ಯೋಜನೆ ಯಶಸ್ವಿ ಆಗಲಿ ಎಂದು ಎಲ್ಲರೂ ಶುಭ ಕೋರುತ್ತಿದ್ದಾರೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಇದಕ್ಕೆ ಶುಭ ಹಾರೈಸಿದಿದ್ದಾರೆ. ನಟ ರಮೇಶ್​ ಅರವಿಂದ್​ ಕೂಡ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಮೂಲಕ ಅವರು ಇಸ್ರೋ ವಿಜ್ಞಾನಿಗಳಿಗೆ ವಿಶ್​ ಮಾಡಿದ್ದಾರೆ. ‘ಸಂಜೆ ಚಂದ್ರ ಮಂಡಲದ ಮೇಲೆ ಚಂದ್ರಯಾನ 3 ಲ್ಯಾಂಡ್​ ಆಗಲಿದೆ. ಆ ಲ್ಯಾಂಡಿಂಗ್​ ಯಶಸ್ವಿಯಾಗಲಿ. ಆಲ್​ ದಿ ಬೆಸ್ಟ್​ ಇಸ್ರೋ’ ಎಂದು ರಮೇಶ್​ ಅರವಿಂದ್​ ಅವರು ಶುಭ ಹಾರೈಸಿದ್ದಾರೆ. ಅದೇ ರೀತಿ ನಟಿ ತಾರಾ ಕೂಡ ತಮ್ಮ ವಿಶ್​ ತಿಳಿಸಿದ್ದಾರೆ.