ಎರಡು ಟ್ರಾಕ್ಟರು‌ಗಳ ನಡುವಣ ಜಗ್ಗಾಟ! ತುಂಡಾದ ಟ್ರ್ಯಾಕ್ಟರ್, ಚಾಲಕ ಸ್ಪಲ್ಪದರಲ್ಲೇ ಬಚಾವು

ವಿಜಯಪುರ: ಗ್ರಾಮೀಣ ಭಾಗದ ಜನರು ತಮ್ಮ ಮನರಂಜನೆಗಾಗಿ, ತಮ್ಮಲ್ಲಿನ ಶಕ್ತಿ ಸಾಮರ್ಥ್ಯಗಳ ಪ್ರದರ್ಶನಕ್ಕಾಗಿ ನಾನಾ ಸ್ಪರ್ಧೆಗಳಲ್ಲಿ ತೊಡಗುವುದುಂಟು. ತಮ್ಮಲ್ಲಿ ಲಭ್ಯವಿರುವ ಸಾಧನ ಸಲಕರಣೆಗಳನ್ನೇ ಬಳಸಿ, ಪ್ರತಿಭೆಯನ್ನು ಓರೆಗೆ ಹಚ್ಚುವುದು ಉಂಟು. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ಜಾತ್ರೆ ನಿಮಿತ್ಯ ನಡೆದ ಸ್ಪರ್ಧೆಯೂ ಹೀಗೇ ಚಿತ್ತಾಕರ್ಷಕವಾಗಿತ್ತು.