ಕ್ಷೇತ್ರದ ಅಭಿವೃದ್ಧಿ ಅನುದಾನ ಕೇಳಿಕೊಂಡು ಸಿದ್ದರಾಮಯ್ಯ ಬಳಿ ಹೋಗಲ್ಲ, ಶಿವಕುಮಾರ್ ಬಳಿ ಹೋಗುವುದಾಗಿ ಮುನಿರತ್ನ ಹೇಳಿದರು. ಬೆಂಗಳೂರು ಅಭಿವೃದ್ಧಿ ಸಚಿವ ಶಿವಕುಮಾರ್ ಆಗಿರುವುದರಿಂದ ಅವರ ಮತ್ತು ಸುರೇಶ್ ಅವರಿದ್ದಲ್ಲಿಗೆ ಹೋಗಿ ಇಬ್ಬರ ಕಾಲು ಹಿಡಿದು ಅನುದಾನ ಕೇಳುವುದಾಗಿ ಅವರು ಹೇಳಿದರು. ಅವರು ಕೊಟ್ಟರೆ ಸರಿ ಇಲ್ಲದಿದ್ದರೆ ತಮ್ಮ ಮತದಾರನ ಬಳಿ ಹೋಗಿ ಕಾಲು ಹಿಡಿದು ಬೇಡಿದರೂ ಅನುದಾನ ಸಿಕ್ಕಿಲ್ಲ ಅಂತ ಕೈ ಚೆಲ್ಲುವುದಾಗಿ ಮುನಿರತ್ನ ಹೇಳಿದರು.