ಮಾಲೂರು: ಆರು ಲಾರಿ ಲೋಡ್​ ಪುಸ್ತಕ ಇರುವ ಬೃಹತ್ ಪುಸ್ತಕ ಮನೆಗೆ ಇಲ್ಲ ಸೂರು

ಬೆಂಗಳೂರಿನಿಂದ ಮಾಲೂರಿಗೆ ಪುಸ್ತಕ ಮನೆಯನ್ನು ಸ್ಥಳಾಂತರ ಮಾಡಿರುವ ಹರಿಹರಪ್ರಿಯಗೆ ಸದ್ಯ ತಮ್ಮ ಪುಸ್ತಕಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ತಮ್ಮ ಪುಸ್ತಕ ಉಳಿಸಿಕೊಳ್ಳಲು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರದಿಂದ ನಿರೀಕ್ಷಿತ ಸಹಾಯ ಸಿಗದೆ ಹೋದಲ್ಲಿ ಭಿಕ್ಷೆ ಬೇಡಿಯಾದರೂ ತಮ್ಮ ಪುಸ್ತಕಗಳನ್ನ ಉಳಿಸಿಕೊಳ್ಳುವ ಮಾತನ್ನಾಡಿದ್ದಾರೆ.