‘ಸಿನಿಮಾ ಬಗ್ಗೆ ಜಗದೀಶ್ ಅವರಿಗೆ ಕನಸು ಇತ್ತು. ಅದಕ್ಕಾಗಿ ಆರೋಗ್ಯವನ್ನೂ ಲೆಕ್ಕಸದೇ ಅವರು ಕೆಲಸ ಮಾಡಿದ್ದರು. ಆಗಲೇ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಇತ್ತೀಚೆಗೆ ಎರಡೂ ಕಿಡ್ನಿ ವೈಫಲ್ಯ ಆಗಿತ್ತು. ಡಯಾಲಿಸಿಸ್ ಮಾಡಿಸುತ್ತಿದ್ದರು. ಡಯಾಲಿಸಿಸ್ ವೇಳೆ ಬ್ರೇನ್ನಲ್ಲಿ ರಕ್ತಸ್ರಾವ ಆಯಿತು. ಎರಡು ದಿನಗಳಿಂದ ಕೋಮಾದಲ್ಲಿ ಇದ್ದರು. ಇಂದು (ಅ.18) ಬೆಳಗ್ಗೆ ಅವರು ನಮ್ಮನ್ನು ಅಗಲಿದ್ದಾರೆ. ಅವರಿಗೆ ಆರೋಗ್ಯದ ಅದೃಷ್ಟ ಕೈ ಹಿಡಿಯಲಿಲ್ಲ. ಅಮೂಲ್ಯ ಅವರು ಚಿತ್ರರಂಗದಲ್ಲಿ ಯಶಸ್ಸು ಕಾಣಲು ದೀಪಕ್ ಮತ್ತು ತಾಯಿ ಶ್ರಮಪಟ್ಟಿದ್ದರು’ ಎಂದು ಅಮೂಲ್ಯ ಪತಿ ಜಗದೀಶ್ ಅವರು ಹೇಳಿದ್ದಾರೆ.