ಅನಂತ್ ಅಂಬಾನಿ ಆರತಕ್ಷತೆಗೆ ಪಳಪಳನೆ ಹೊಳೆಯುತ್ತಾ ಬಂದ ತಮನ್ನಾ ಭಾಟಿಯಾ

ಮುಕೇಶ್​ ಅಂಬಾನಿ-ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್ ಅಂಬಾನಿಯ ಮದುವೆ ಮುಗಿದಿದೆ. ಇಂದು (ಜುಲೈ 14) ಆರತಕ್ಷತೆ ಕಾರ್ಯಕ್ರಮ ಕೂಡ ಅಷ್ಟೇ ಅದ್ದೂರಿಯಾಗಿ ನಡೆಯುತ್ತಿದೆ. ಮುಂಬೈನ ಜಿಯೋ ವರ್ಲ್ಡ್​ ಕನ್ವೆನ್ಷನ್ ಸೆಂಟರ್​ನಲ್ಲಿ ರಿಸೆಪ್ಷನ್​ ನಡೆಯುತ್ತಿದ್ದು, ಹಲವಾರು ಸೆಲೆಬ್ರಿಟಿಗಳು ಅತಿಥಿಗಳಾಗಿ ಭಾಗವಹಿಸಿದ್ದಾರೆ. ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರಿಗೂ ಈ ಸಮಾರಂಭಕ್ಕೆ ಆಹ್ವಾನ ಬಂದಿದೆ. ಹಾಗಾಗಿ ಅವರು ಕುಟುಂಬದವರ ಜೊತೆ ಬಂದು ನವ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ. ಆಕರ್ಷಕವಾದ ಉಡುಗೆ ಧರಿಸಿ ಬಂದಿರುವ ತಮನ್ನಾ ಅವರು ಪಾಪರಾಜಿಗಳ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಈ ಚಂದದ ಡ್ರೆಸ್​ನಲ್ಲಿ ಅವರು ಪಳಪಳನೆ ಹೊಳೆದಿದ್ದಾರೆ. ತಮನ್ನಾ ಭಾಟಿಯಾ ಅವರ ಅಭಿಮಾನಿಗಳ ವಲಯದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ತಮನ್ನಾ ಫೇಮಸ್​ ಆಗಿದ್ದಾರೆ.