ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್ ನಾಯಕರು

ಕುಮಾರಸ್ವಾಮಿಯವರಿಗೆ ಆರೋಗ್ಯ ಸರಿ ಇದ್ದಂತಿಲ್ಲ, ಫ್ರೀಡಂ ಪಾರ್ಕ್​ಗೆ ಅವರು ಸ್ವೆಟರ್ ಧರಿಸಿ ಬಂದರು ಮತ್ತು ವೇದಿಕೆ ಹತ್ತಿದಾಗ ಕೆಮ್ಮುತ್ತಿದ್ದರು. ಮಾತಾಡುತ್ತೀರಾ ಎಂದು ನಿಖಿಲ್ ಸನ್ನೆ ಭಾಷೆಯಲ್ಲಿ ಕೇಳಿದಾಗ ಇಲ್ಲ, ನೀನೇ ಮುಂದುವರಿಸು ಎಂದು ಅವಅರು ಸಹ ಸನ್ನೆ ಮಾಡುತ್ತಾ ಹೇಳಿದರು. ವೇದಿಕೆ ಮೇಲಿದ್ದ ಮುಖಂಡರ ಕೈಯಲ್ಲಿ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಮತ್ತು ವಿಧಾನ ಸೌಧ ಚಲೋ ಪ್ಲಕಾರ್ಡ್​​ಗಳಿದ್ದವು.