ರಿಷಬ್​ ಶೆಟ್ಟಿ ನ್ಯಾಷನಲ್ ಅವಾರ್ಡ್ ಪಡೆದಿದ್ದಕ್ಕೆ ನಟ ಯಶ್ ನೀಡಿದ ಮೊದಲ ಪ್ರತಿಕ್ರಿಯೆ ಏನು?

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡದ ಸಿನಿಮಾಗಳು ಶೈನ್​ ಆಗಿವೆ. ರಿಷಬ್​ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ​‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಒಲಿದಿದೆ. ಈ ಸುದ್ದಿ ತಿಳಿದು ನಟ ‘ರಾಕಿಂಗ್ ಸ್ಟಾರ್​’ ಯಶ್​ ಅವರು ದೂರವಾಣಿ ಮೂಲಕ ರಿಷಬ್​ ಶೆಟ್ಟಿಗೆ ಅಭಿನಂದನೆ ತಿಳಿಸಿದರು. ಆ ಬಗ್ಗೆ ರಿಷಬ್​ ಮಾತನಾಡಿದ್ದಾರೆ. ‘ಯಶ್​ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾಗೆ ತುಂಬ ದೊಡ್ಡ ಬೆಂಬಲ ನೀಡಿದ್ದರು. ಸಿನಿಮಾ ನೋಡಿ ನನಗೆ ವಿಶ್​ ಮಾಡಿದ್ದರು. ಜನರಿಗೆ ಆ ಸಿನಿಮಾ ತಲುಪಲು ಅವರ ಕೊಡುಗೆ ಇತ್ತು. ಆ ಫೀಲಿಂಗ್​ ಇಂದಿಗೂ ಅವರ ಮೇಲಿದೆ. ಇಂದು ಅವರು ಶೂಟಿಂಗ್​ನಲ್ಲಿ ಇದ್ದರಂತೆ. ರಾಷ್ಟ್ರ ಪ್ರಶಸ್ತಿ ಬಂದ ತಕ್ಷಣ ಫೋನ್​ ಮಾಡಿ ವಿಶ್​ ಮಾಡಿದರು. ಖುಷಿ ಆಯಿತು, ತುಂಬ ಹೆಮ್ಮೆ ಎನಿಸುತ್ತಿದೆ ಅಂತ ಹೇಳಿದರು. ‘ಕೆಜಿಎಫ್​ 2’ ಸಿನಿಮಾಗೆ ಪ್ರಶಸ್ತಿ ಬಂದಿದ್ದಕ್ಕೆ ನಾನು ಅವರಿಗೆ ವಿಶ್​ ಮಾಡಿದೆ’ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.