ಬೆಂಬಲಿಗರೊಡನೆ ಹೆಚ್ ಡಿ ರೇವಣ್ಣ

ಅವರೊಡನೆ ಮಾತಾಡಲು ರೇವಣ್ಣ ಹೊರ ಬಂದಾಗ ಜನ ಅಣ್ಣಾ ನಿಮ್ಮೊಂದಿಗೆ ನಾವಿದ್ದೇವೆ, ನೀವು ಯಾವ ಕಾರಣಕ್ಕೂ ಹೆದರಬಾರದು ಅಂತ ಕಿರುಚುವ ಧ್ವನಿಯಲ್ಲಿ ಹೇಳಿದರು. ರೆವಣ್ಣ ಹತ್ತಿರ ಹೋಗುವಲ್ಲಿ ಸಫಲರಾದ ಕೆಲವರು ಅವರನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದರು ಮತ್ತು ಕೆಲವರು ಅವರ ಗದ್ದ, ಕೆನ್ನೆ ನೇವರಿಸಿ ತಮ್ಮ ಪ್ರೀತಿ-ಅಭಿಮಾನ ವ್ಯಕ್ತಪಡಿಸಿದರು.