ಕೋಲಾರ ಹಾಲು ಒಕ್ಕೂಟದಿಂದ ರೈತರಿಂದ ಹಾಲು ಖರೀದಿ ದರವನ್ನು ಒಂದು ರೂಪಾಯಿ ಇಳಿಕೆ ಮಾಡಿರುವ ವಿಚಾರವಾಗಿ ಮಾಲೂರು ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಪ್ರತಿಕ್ರಿಯಿಸಿದ್ದು, ಮೊದಲಿನಿಂದಲೂ ಹಾಲಿನ ದರ ಇಳಿಕೆ ಮಾಡುವುದು ಸಂಪ್ರದಾಯ ಅದರಂತೆಯೇ ಒಂದು ರೂಪಾಯಿಯಷ್ಟೇ ಇಳಿಕೆ ಮಾಡಲಾಗಿದೆ ಎಂದಿದ್ದಾರೆ.