ಭವಾನಿ ರೇವಣ್ಣ

ಸಮಸ್ಯೆಯೇನೆಂದರೆ ಅವರು ಮಾಧ್ಯಮಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬೇರೆ ದಾರಿಯಾದರೂ ಯಾವುದಿದೆ? ಮೊದಲೆಲ್ಲ ತಾವಾಗಿಯೇ ಮಾಧ್ಯಮದವರ ಜೊತೆ ಮಾತಾಡಲು ಇಷ್ಟಪಡುತ್ತಿದ್ದರು. ಪರಿಸ್ಥಿತಿ ಈಗ ಬದಲಾಗಿದೆ. ಅವರ ಮಗ ಪ್ರಜ್ವಲ್ ರೇವಣ್ಣ, ಭಾರತದಲ್ಲೇ ಅತಿ ದೊಡ್ಡ ಲೈಂಗಿಕ ಹಗರಣ ಎನ್ನಲಾಗಿರುವ ಪ್ರಕರಣದಲ್ಲಿ ಆರೋಪಿಯೆನಿಸಿಕೊಂಡು ವಿದೇಶಕ್ಕೆ ಹೋಗಿದ್ದಾರೆ.