ದೈತ್ಯಜೀವಿಗಳಾಗಿರುವ ಆನೆಗಳ ನಡಿಗೆ ಮನಸೂರೆಗೊಳ್ಳುತ್ತದೆ. ತಮ್ಮ ಭಾರೀ ದೇಹವನ್ನು ಕಂಬದಂಥ ಕಾಲುಗಳ ಮೇಲೆ ಹೊತ್ತು ಸೊಂಡಿಲಿನ ಮುಂಭಾಗವನ್ನು ನೆಲಕ್ಕೆ ತಾಕದಂತೆ ಕೊಂಚ ಮುದುಡಿಕೊಂಡು ಅವು ಕಾಡಿನಲ್ಲಾಗಲೀ ಅಥವಾ ನಾಡಿನಲ್ಲಾಗಲೀ ನಡೆದುಹೋಗುವ ದೃಶ್ಯ ಗಮನ ಸೆಳೆಯುತ್ತದೆ ಮತ್ತು ನಿಂತು ವೀಕ್ಷಿಸುವಂತೆ ಮಾಡುತ್ತದೆ.