ಒಂದು ವರ್ಷದಿಂದ ಗದ್ದೆಯಲ್ಲಿ ಮನೆ ಮಾಡಿ, ಬೆಚ್ಚಗೆ ಮಲಗಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ. ಬರೋಬ್ಬರಿ 14 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ, ಚಿದಂಬರ ಹೆಬ್ಬಾರ್ ಗದ್ದೆಯಲ್ಲಿ ಕಳೆದ ಒಂದು ವರ್ಷದಿಂದ ಕಾಳಿಂಗ ಸರ್ಪ ವಾಸವಾಗಿತ್ತು. ಒಂದು ವರ್ಷದಿಂದ ಗದ್ದೆ ಕೃಷಿ ಮಾಡದೆ ಈ ಕೃಷಿಕ ಪಾಳು ಬಿಟ್ಟಿದ್ದರು. ಈ ವರ್ಷ ಗದ್ದೆ ಕೃಷಿ ಮಾಡಲು ರೈತ ಮುಂದಾಗಿದ್ದ ವೇಳೆ ಈ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದ್ದು, ಕೃಷಿ ಮಾಡುವ ವೇಳೆ ಕಾರ್ಮಿಕರಿಗೆ, ಪದೇ ಪದೇ,ರೌದ್ರಾವತಾರವನ್ನು ಈ ಕಾಳಿಂಗ ಸರ್ಪ ತೋರಿಸಿದೆ. ಕೊಪ್ಪ ತಾಲೂಕಿನ ಕೋಡಿಹಿತ್ಲು ಸಮೀಪದ, ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಗದ್ದೆ ಉಳಿಮೆ ವೇಳೆ, ಪದೇ ಪದೇ ಕಾರ್ಮಿಕರಿಗೆ ಕಾಳಿಂಗ ಸರ್ಪ ಕಾಣಿಸಿ ಕೊಂಡು ಭಯದ ವಾತಾವರಣ ನಿರ್ಮಾಣ ಮಾಡಿತ್ತು.