ಪುನೀತ್ ರಾಜ್ಕುಮಾರ್ ಅವರು ಒಳ್ಳೆಯ ನಟ, ಅದ್ಭುತ ಡ್ಯಾನ್ಸರ್ ಆಗಿರುವ ಜೊತೆಗೆ ಅತ್ಯದ್ಭುತವಾದ ಫೈಟರ್ ಸಹ ಆಗಿದ್ದರು. ತಮ್ಮ ಸಿನಿಮಾಗಳಲ್ಲಿ ಡ್ಯೂಪ್ಗಳು ಇಲ್ಲದೆ ಫೈಟ್ ದೃಶ್ಯಗಳನ್ನು ಭಾಗಿ ಆಗುತ್ತಿದ್ದರು. ಅವರಷ್ಟು ರಿಸ್ಟ್ ತೆಗೆದುಕೊಂಡು ಆಕ್ಷನ್ ದೃಶ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದ ಮತ್ತೊಬ್ಬ ಸ್ಟಾರ್ ನಟ ಕನ್ನಡ ಚಿತ್ರರಂಗದಲ್ಲಿ ಇರಲಿಲ್ಲ. ಆದರೆ ಅದಕ್ಕಾಗಿ ಅವರು ಸಾಕಷ್ಟು ತರಬೇತಿ ಪಡೆದಿರುತ್ತಿದ್ದರು. ಪುನೀತ್ ರಾಜ್ಕುಮಾರ್ ಅವರು ನಾಯಕನಾಗಿ ಎಂಟ್ರಿ ಕೊಡುವ ಮುಂಚೆ ಅಪ್ಪು ವೆಂಕಟೇಶ್ ಅವರು ಅವರಿಗೆ ತರಬೇತಿ ನೀಡುತ್ತಿದ್ದರು.