ನೆಲಮಂಗಲ ತಾಲೂಕಿನ ಗೋರಿನಬೆಲೆ ಗ್ರಾಮದ ರಸ್ತೆಯನ್ನು ಅಧಿಕಾರಿಗಳು ಅಗೆದು ಹಾಳು ಮಾಡಿದ್ದಾರೆ. ಇದರಿಂದ ಗೋರಿನಬೆಲೆ, ಗುರುವನಹಳ್ಳಿ, ವಸಂತನಗರ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಭೂಮಾಲೀಕರು ರಸ್ತೆಯನ್ನು ಬಿಟ್ಟುಕೊಡಲು ಸಿದ್ಧರಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಕಂದಾಯ ಮಂತ್ರಿಗಳ ಫೋಟೋಗೆ ಪೂಜೆ ಸಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.