ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಹಲವು ಕುಟುಂಬಗಳು ಜಲಸಮಾಧಿಯಾಗಿವೆ. ಈವರೆಗೆ 3 ಸಾವಿರಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದ್ದು, ಮೃತರ ಸಂಖ್ಯೆ 238 ಏರಿಕೆ ಆಗಿದೆ. ಚಾಲಿಯಾರ್ ನದಿಯ ಒಂದು ಭಾಗದಲ್ಲಿ ನೂರಾರು ಜನರು ಸಿಲುಕ್ಕಿದ್ದು, ಅವರನ್ನು ಕಾಪಾಡಲು ರಾತ್ರೋರಾತ್ರಿ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಸೇನೆ ಮುಂದಾಗಿದೆ.