ಅಣ್ಣ ಎಂದು ಅಳುತ್ತಾ ಕೂಗಿದ ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ

ವಿಜಯವಾಡದಲ್ಲಿ ಭಾವುಕಳಾದ ಪುಟ್ಟ ಬಾಲಕಿಯೊಬ್ಬಳು ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಯನ್ನು ಅಣ್ಣ ಎಂದು ಕೂಗಿದ್ದಾಳೆ. ಅಪಾರ ಜನಸಂದಣಿಯ ನಡುವೆಯೂ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಆಕೆಯನ್ನು ಅಪ್ಪಿಕೊಂಡು, ಮುತ್ತಿಕ್ಕಿ ಸೆಲ್ಫಿ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಹೃದಯಸ್ಪರ್ಶಿ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜಗನ್ ಮೋಹನ್ ರೆಡ್ಡಿ ಆ ಹುಡುಗಿಯನ್ನು ಗಮನಿಸಿ ಭೇಟಿಯಾಗುವುದನ್ನು ವೀಡಿಯೊದಲ್ಲಿ ಕಾಣಬಹುದು.