‘ನನಗೆ ಗೊತ್ತಿಲ್ಲದ ವಿಚಾರವನ್ನು ಕಲಿತು ಸಿನಿಮಾ ಮಾಡಿದ್ದೇನೆ’; ‘ಟೋಬಿ’ ಬಗ್ಗೆ ರಾಜ್​ ಬಿ. ಶೆಟ್ಟಿ ಮಾತು

ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ಭಿನ್ನ ಪಾತ್ರಗಳ ಮೂಲಕ, ಹೊಸ ರೀತಿಯ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ತಲೆಯ ಮೇಲೆ ಕೂದಲು ಇಲ್ಲ ಎನ್ನುವ ವಿಚಾರ ಇಟ್ಟುಕೊಂಡೇ ಅವರು ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮಾಡಿದ್ದರು. ಈಗ ಅವರು ಟೋಬಿ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರೋಕೆ ರೆಡಿ ಆಗಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ಇಷ್ಟು ವರ್ಷ ಗೊತ್ತಿರುವ ವಿಚಾರವನ್ನೇ ಹೇಳಿದ್ದೇವೆ. ಈ ಸಿನಿಮಾದಲ್ಲಿ ಗೊತ್ತಿಲ್ಲದ ವಿಚಾರವನ್ನು ಹೇಳೋಕೆ ಪ್ರಯತ್ನಿಸಿದ್ದೇವೆ’ ಎಂದಿದ್ದಾರೆ ಅವರು.