ವಿಧಾನ ಪರಿಷತ್ ಚೇರ್ಮನ್ ಬಸವರಾಜ ಹೊರಟ್ಟಿ

ಒಂದು ಪಕ್ಷ ಸಿಟಿ ರವಿಯವರು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದರೆ ಅದನ್ನು ಎಥಿಕ್ಸ್ ಕಮಿಟಿಗೆ ಕಳಿಸಲಾಗುವುದು, ವಿಧಾನಸಭೆ ಮತ್ತು ಪರಿಷತ್ ಗೆ ಅದೇ ದೊಡ್ಡ ಮತ್ತು ನಿರ್ಣಾಯಕ ಅಂಗ, ಸಮಿತಿಯ ಸದಸ್ಯರು ಫುಟೇಜನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ ವರದಿಯೊಂದನ್ನು ತಮಗೆ ಸಲ್ಲಿಸುತ್ತಾರೆ, ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೊರಟ್ಟಿ ಹೇಳಿದರು