ತಮಿಳುನಾಡಿನ ಗೇರುಮಾಳದ ರಸ್ತೆಯಲ್ಲಿ ಒಂಟಿ ಸಲಗವೊಂದು (Elephant) ರಸ್ತೆ ಮಧ್ಯೆ ಬಿಂದಾಸ್ ಆಗಿ ಓಡಾಡುತ್ತ ವಾಹನ ಸವಾರರಿಗೆ ಭಯ ಹುಟ್ಟಿಸಿದೆ. ನಡು ರಸ್ತೆಯಲ್ಲಿ ಗಜರಾಜನ ಸಂಚಾರ ನೋಡಿ ವಾಹನ ಸವಾರರು ಕೆಲ ಕ್ಷಣ ಭಯದಲ್ಲಿ ನಡುಗುವಂತಾಗಿತ್ತು. ಸಾಮಾನ್ಯವಾಗಿ ಈ ಮಾರ್ಗದಲ್ಲಿ ವಾಹನ ಸವಾರರು ತರಕಾರಿಗಳನ್ನ ರಫ್ತು ಮಾಡುತ್ತಾರೆ. ಹೀಗಾಗಿ ಆಹಾರ ಅರಸಿ ಬಂದ ಒಂಟಿ ಸಲಗ ವಾಹನಗಳ ಬಳಿ ತೆರಳಿ ತರಕಾರಿಗಾಗಿ ಶೋಧ ನಡೆಸಿದೆ.