ಕೋಲಾರ, ಆಗಸ್ಟ್ 6: ಹಾಡಗಲೇ ಹೋಟೆಲ್ನಲ್ಲಿದ್ದ ಇಡ್ಲಿ ಬಾಕ್ಸ್ ಅನ್ನು ಕದ್ದು ಪರಾರಿಯಾದ ಘಟನೆ ಕೋಲಾರದ ಬ್ರಾಹ್ಮಣರ ಬೀದಿಯಲ್ಲಿ ನಡೆದಿದೆ. ಪುಲಿ ಇಡ್ಲಿ ಹೋಟಲ್ ಮಾಲೀಕ ನವೀನ್ ಮನೆಗೆ ಹೋಗಿ ಬರುವಷ್ಟರಲ್ಲಿ ಇಡ್ಲಿ ಬಾಕ್ಸ್ ಕಳವು ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಗೆ ಈ ಕಳ್ಳತನ ನಡೆದಿದ್ದು, ಇಡ್ಲಿ ಬಾಕ್ಸ್ ಹೊತ್ತುಕೊಂಡು ಹೋಗುವ ದೃಶ್ಯ ಸಿಸಿ ಟಿಟಿ ಕ್ಯಾಮರಾದಲ್ಲಿ ಸೆರೆಯಾಗಿದೆ.