Harshika Byte 1

ಕೊಡಗಿನ ಅಮ್ಮತ್ತಿ ಕೊಡವ ಸಮಾಜದಲ್ಲಿ ಆಗಸ್ಟ್​ 23 ಹಾಗೂ 24ರಂದು ಹರ್ಷಿಕಾ ಪೂಣಚ್ಚ ಮತ್ತು ಭುವನ್​ ಪೊನ್ನಣ್ಣ ಅವರ ಮದುವೆ ನಡೆಯಲಿದೆ. ಇಬ್ಬರೂ ಕೊಡಗಿನವರು. ಹಾಗಾಗಿ ಕೊಡವ ಸಂಪ್ರದಾಯದ ರೀತಿಯಲ್ಲಿ ಈ ವಿವಾಹ ನೆರವೇರಲಿದೆ. ಎಷ್ಟು ದಿನ ಮದುವೆ ನಡೆಯಲಿದೆ? ಯಾವೆಲ್ಲ ರೀತಿಯ ಶಾಸ್ತ್ರಗಳು ಇರಲಿವೆ ಎಂಬುದನ್ನು ಭುವನ್​ ಮತ್ತು ಹರ್ಷಿಕಾ ಪೂಣಚ್ಚ ವಿವರಿಸಿದ್ದಾರೆ. ಆ ವಿಡಿಯೋ ಇಲ್ಲಿದೆ. ‘ನಮ್ಮ ಮದುವೆ ಕೊಡಗಿನಲ್ಲೇ ಆಗಬೇಕು ಎಂಬುದು ನನ್ನ ಆಸೆಯಾಗಿತ್ತು. ಅದು ಈಗ ನೆರವೇರುತ್ತಿದೆ. ಕೊಡವ ಶೈಲಿಯ ಮದುವೆಯನ್ನು ನೋಡಲು ಎಲ್ಲ ಸ್ನೇಹಿತರು ಬರಬೇಕು. ನಮ್ಮ ಸಂಪ್ರದಾಯದಲ್ಲಿ ರಿಸೆಪ್ಷನ್​ ಎಂಬುದು ಇಲ್ಲ. ಎರಡು ದಿನಗಳ ಕಾಲ ಮದುವೆ ನಡೆಯುತ್ತದೆ. ಹೆಚ್ಚು ಆಡಂಬರ ಇರುವುದಿಲ್ಲ’ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.