70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ಶಾಕಿಂಗ್ ವಿಡಿಯೋ ಇಲ್ಲಿದೆ

ಗಂಗಾ ನದಿಯ ಸೇತುವೆಯ ರೇಲಿಂಗ್ ಮೇಲೆ ಹತ್ತಿ, ಸುತ್ತಲೂ ನೋಡಿದ ಯುವತಿ ನಂತರ ಗಂಗೆಗೆ ಹಾರಿದ್ದಾಳೆ. ಹಾಪುರದ ಗರ್ಮುಕ್ತೇಶ್ವರದಲ್ಲಿ 70 ಅಡಿ ಎತ್ತರದ ಸೇತುವೆಯಿಂದ ಯುವತಿ ಜಿಗಿದ ವಿಡಿಯೋ ವೈರಲ್ ಆಗಿದೆ. ಹಾಪುರದ ಗರ್ಮುಕ್ತೇಶ್ವರದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಗಂಗಾ ನದಿಗೆ ಹಾರಿದ್ದಾಳೆ. ಆದರೆ, ಡೈವರ್‌ಗಳು ಆಕೆಯನ್ನು ಗಮನಿಸಿ, ತಕ್ಷಣ ಆಕೆಯನ್ನು ಕಾಪಾಡಿದ್ದಾರೆ.