ಆರಂಭದಿಂದಲೂ ಉಗ್ರಂ ಮಂಜು ಮತ್ತು ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಮನೆಯಲ್ಲಿ ಅಣ್ಣ-ತಂಗಿ ರೀತಿ ಇದ್ದರು. ಅನೇಕ ಸಂದರ್ಭಗಳಲ್ಲಿ ಅವರಿಬ್ಬರ ನಡುವೆ ಸೆಂಟಿಮೆಂಟ್ ಅಡ್ಡ ಬರುತ್ತಿತ್ತು. ಆದರೆ ಈಗ ಸೆಂಟಿಮೆಂಟ್ ಬದಿಗಿಟ್ಟು ಮೋಕ್ಷಿತಾ ಪೈ ಮತ್ತು ಮಂಜು ಆಟ ಆಡುತ್ತಿದ್ದಾರೆ. ಮಂಜು ರಾಜನಾಗಿದ್ದರೆ, ಮೋಕ್ಷಿತಾ ಯುವರಾಣಿ ಆಗಿದ್ದಾರೆ. ಇಬ್ಬರ ನಡುವೆ ಜಿದ್ದಾಜಿದ್ದಿ ಮುಂದುವರಿದಿದೆ. ನವೆಂಬರ್ 27ರ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ.