ಶ್ರೀಲಂಕಾ ಅಧ್ಯಕ್ಷರೊಂದಿಗೆ ಮೀನುಗಾರರ ಸಮಸ್ಯೆಯನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಶ್ರೀಲಂಕಾದ ಅಧಿಕಾರಿಗಳು ತಮಿಳುನಾಡಿನ ಮೀನುಗಾರರನ್ನು ಪದೇ ಪದೇ ಬಂಧಿಸುತ್ತಿರುವುದು ಎರಡೂ ದೇಶಗಳ ನಡುವಿನ ದೀರ್ಘಕಾಲದ ಸಂಘರ್ಷವಾಗಿದೆ. ವಿದೇಶಾಂಗ ಸಚಿವಾಲಯದ ವರದಿಗಳ ಪ್ರಕಾರ, ಶ್ರೀಲಂಕಾದ ಅಧಿಕಾರಿಗಳು 11 ಮೀನುಗಾರರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಜನರನ್ನು ಮಾನವೀಯ ಆಧಾರದ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.