ಎಸ್ಐಟಿ ವಶದಲ್ಲಿ ನವೀನ್ ಗೌಡ ಮತ್ತು ಚೇತನ್

ಹೈಕೋರ್ಟ್ ನಲ್ಲಿ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಮತ್ತು ಕೋರ್ಟ್ ಗೆ ಬರೋದು ಅಧಿಕಾರಿಗಳಿಗೆ ಗೊತ್ತಿತ್ತು. ಹಾಗಾಗಿ ಅವರಿಗಾಗಿ ಕಾಯುತ್ತಿದ್ದ ಅಧಿಕಾರಿಗಳು ಇಂದು ಕೋರ್ಟ್ ಅವರಣದಲ್ಲಿ ಕಂಡೊಡನೆ ವಶಕ್ಕೆ ಪಡೆದಿದ್ದಾರೆ. ಪೊಲೀಸ್ ವ್ಯಾನೊಂದರಲ್ಲಿ ಅವರನ್ನು ಎಸ್ಐಟಿ ಕಚೇರಿಗೆ ಕರೆದೊಯ್ಯುತ್ತಿರುವ ದೃಶ್ಯಗಳನ್ನು ನೋಡಬಹುದು.