ಶಿವಣ್ಣನ ಬರ್ತ್ಡೇಗೆ ಆಟೋ ಹತ್ತಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದ ಕಾಫಿ ನಾಡ ಚಂದು

ಶಿವರಾಜ್ಕುಮಾರ್ ಅವರಿಗೆ ಇಂದು (ಜುಲೈ 12) ಜನ್ಮದಿನದ ಸಂಭ್ರಮ. ಅವರ ಮನೆಯ ಸಮೀಪ ಬಂದು ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ಅದೇ ರೀತಿ ಶಿವಣ್ಣ ಹಾಗೂ ಪುನೀತ್ ಅಭಿಮಾನಿ ಕಾಫಿ ನಾಡ ಚಂದು ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಶಿವಣ್ಣನ ಭೇಟಿ ಮಾಡಿ ವಿಶ್ ತಿಳಿಸುವ ಉದ್ದೇಶ ಹೊಂದಿದ್ದಾರೆ. ವಿಶೇಷ ಎಂದರೆ ಅವರು ಆಟೋ ಏರಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದಿದ್ದಾರೆ ಎಂಬುದು ವಿಶೇಷ. ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ನನಗೆ ಶಿವಣ್ಣನೇ ದೇವರು ಎಂದಿದ್ದಾರೆ ಅವರು.