‘ಇದು ಮುಂದಿನ ಕಥೆ ಅಲ್ಲ, ಆದರೆ ಹೊಸ ಕೇಸ್​’; ‘ಶಿವಾಜಿ ಸೂರತ್ಕಲ್ 2’ ಬಗ್ಗೆ ರಮೇಶ್ ಅರವಿಂದ್ ಮಾತು

ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸೂರತ್ಕಲ್ 2’ ಸಿನಿಮಾ ಈ ವಾರ (ಏಪ್ರಿಲ್ 14) ತೆರೆಗೆ ಬರುತ್ತಿದೆ. ಮೊದಲ ಪಾರ್ಟ್ ಹಿಟ್ ಆದ ಬೆನ್ನಲ್ಲೇ ಎರಡನೇ ಪಾರ್ಟ್​ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಈ ಬಗ್ಗೆ ರಮೇಶ್ ಅರವಿಂದ್ ಅವರು ಮಾತನಾಡಿದ್ದಾರೆ. ಈ ಸಿನಿಮಾದ ಸೌಂಡ್ ಎಫೆಕ್ಟ್ ಹಾಗೂ ಮೇಕಿಂಗ್​ ನೋಡೋಕೆ ಚಿತ್ರಮಂದಿರಕ್ಕೆ ಬರಬೇಕು ಅನ್ನೋದು ರಮೇಶ್ ಅರವಿಂದ್ ಮಾತು. ಅಂದಹಾಗೆ, ಮೊದಲನೇ ಪಾರ್ಟ್​ಗೂ ಎರಡನೇ ಪಾರ್ಟ್​​ಗೂ ಯಾವುದೇ ಕನೆಕ್ಷನ್ ಇಲ್ಲ. ಇದು ಹೊಸ ಕೇಸ್ ಅನ್ನೋದು ರಮೇಶ್ ಅರವಿಂದ್ ಮಾತು.