ಕಳೆದ ವಾರ ಬೆಂಗಳೂರು ನಗರದ ಚಾಮರಾಜಪೇಟೆಯಲ್ಲಿ ಶೇಖ್ ನಸ್ರು ಹೆಸರಿನ ವ್ಯಕ್ತಿಯೊಬ್ಬ ರಾತ್ರಿ ಸಮಯದಲ್ಲಿ ವಿಶ್ರಮಮಿಸುತ್ತಿದ್ದ ಹಸುಗಳ ಕೆಚ್ಚಲು ಕೊಯ್ದಿದನ್ನು ಖಂಡಿಸಿ ಪ್ರತಾಪ್ ಸಿಂಹ ನೇತೃತ್ವದಲ್ಲಿ ಮೈಸೂರಿನ ಬಿಜೆಪಿ ಮುಖಂಡರು ಜಲದರ್ಶಿನಿ ಗೇಟ್ ಎದುರು ಗೋಪೂಜೆ ನೆರವೇರಿಸಿ, ಹಸುಗಳ ಹಾಲು ಕರೆದು, ಅವುಗಳಿಗೆ ಬೆಲ್ಲ ಮತ್ತು ಕಬ್ಬನ್ನು ತಿನ್ನಿಸಿ ತಮಗಾಗಿರುವ ನೋವನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.