ಸ್ಪಂದನಾ-ವಿಜಯ್ ರಾಘವೇಂದ್ರ ದಂಪತಿಗೆ ಶೌರ್ಯ ಹೆಸರಿನ ಮಗ ಇದ್ದಾನೆ. ಅಮ್ಮನ ಪ್ರೀತಿಯಲ್ಲಿ ಬೆಳೆದ ಈತನಿಗೆ ತಾಯಿ ಇಲ್ಲ ಎಂಬ ನೋವು ಅತೀವವಾಗಿ ಕಾಡುತ್ತಿದೆ. ಸ್ಪಂದನಾ ಪಾರ್ಥಿವ ಶರೀರದ ಎದುರು ಕುಳಿತು ಶೌರ್ಯ ಕಣ್ಣೀರು ಹಾಕುತ್ತಿದ್ದಾನೆ. ಆತನನ್ನು ಸಮಾಧಾನ ಮಾಡಲು ವಿಜಯ್ ಹಾಗೂ ಶ್ರೀಮುರಳಿ ಪ್ರಯತ್ನಿಸಿದ್ದಾರೆ. ಆದರೆ, ಶೌರ್ಯನ ಕಣ್ಣೀರು ನಿಲ್ಲುತ್ತಿಲ್ಲ. ಇಂದು ಸಂಜೆ ವೇಳೆಗೆ ಸ್ಪಂದನಾ ಅಂತ್ಯ ಸಂಸ್ಕಾರ ನೆರವೇರಲಿದೆ. ಅಲ್ಲಿಯವರೆಗೆ ಸ್ಪಂದನಾ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ.