ಬೆಂಗಳೂರು: ಓಲಾ, ಉಬರ್ನಿಂದ ಸಮಸ್ಯೆಯಾಗುತ್ತಿದೆ ಅಂತಾ ತಿಳಿಸಿದ್ದಾರೆ. ರಾಪಿಡೋ ವಿಚಾರವಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ವಿಮೆ ಮಾಡಿಸಬೇಕು ಅಂತಾ ಚಾಲಕರು ಮನವಿ ಮಾಡಿದ್ದಾರೆ. ಚಾಲಕರ ದಿನಾಚರಣೆ ಮಾಡಲು ಕೋರಿದ್ದಾರೆ. ಮಕ್ಕಳಿಗೆ ವಿದ್ಯಾನಿಧಿ ನೀಡುವಂತೆ ಕೋರಿದ್ದಾರೆ ಎಂದು ಆಟೋ ಚಾಲಕರ ಸಭೆ ಬಳಿಕ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.