ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!

ಮಳೆಗಾಲದ ವಿಧಾನಸಭಾ ಅಧಿವೇಶನ ಶುರುವಾಗುವ ಮೊದಲು, ಖಾಲಿಯಿರುವ 4 ವಿಧಾನ ಪರಿಷತ್ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದರು. ನಾಲ್ವರಲ್ಲಿ ಒಬ್ಬರನ್ನು ಮಾಧ್ಯಮದಿಂದ ಆರಿಸಿಕೊಳ್ಳಲಾಗುವುದು ಅಂತ ಶಿವಕುಮಾರ್ ಹೇಳಿದ್ದು ನಿಜವೋ ಅಥವಾ ತಮಾಷೆಗೆ ಹಾಗೆ ಹೇಳಿದರೋ ಗೊತ್ತಾಗಲಿಲ್ಲ, ಅದನ್ನು ಹೇಳಿದಾಗ ಅವರ ಜೊತೆ ಮಾಧ್ಯಮದವರೂ ನಕ್ಕರು.