ಮುದ್ದು ಕರುವಿಗೆ ಅದ್ಧೂರಿ ನಾಮಕರಣ: ನವನೀತ ಗೋ ಶಾಲೆಯಲ್ಲಿ ಸಡಗರ, ಸಂಭ್ರಮ

ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ನವನೀತ ಗೋ ಶಾಲೆಯಲ್ಲಿ ಮಕ್ಕಳಿಗೆ ನಾಮಕರಣ ಮಾಡಿದಂತೆ ಹಸುವಿನ ಕರುವಿಗೆ ನಾಮಕರಣ ಮಾಡಲಾಗಿದೆ. ತೊಟ್ಟಿಲಿಗೆ ಹೂ ಗಳಿಂದ ಶೃಂಗಾರ ಮಾಡಿ ಮುತೈದೆಯರೆಲ್ಲ ಸೇರಿಕೊಂಡು ಹಸುವಿನ ಕರುವಿಗೆ ತಿಲಕವನಿಟ್ಟು, ದೃಷ್ಟಿ ತೆಗೆದು ತುಳಸಿ ಎಂದು ಹೆಸರಿಟ್ಟು ಸಂಭ್ರಮಿಸಿದ್ದಾರೆ.